You are currently browsing the daily archive for September 3rd, 2008.
ಜಗತ್ತಿನ ಶ್ರೇಷ್ಟ ಪ್ರೇಮ ಯಾವುದೆಂದು ಯಾರೋ ಹುಡುಕುತ್ತ ಹೊರಟರು.
ಅಲ್ಲೆಲ್ಲೋ ತಬ್ಬಿ ಮಲಗಿದ ಎರಡು ಅಸ್ಥಿ ಪಂಜರಗಳು ಸಿಕ್ಕವು.
ಅಡುಗೆಮನೆ ತುಂಬ ಗೀಚಿದೆ, ತೊಪತೊಪನೆ ಉದುರುವ ಜೀವಗಳ ಲೆಕ್ಕ ಇಡಲು ಹೊರಟೆ. ಎಂಥ ಪವರ್ ಫುಲ್ ಮದ್ದದು. ಮೊದಲ ಬಲಿ ಬಿತ್ತು.
ಹೊರಗೆ ಹೋಗಿದ್ದವರು ಬಾಗಿಲು ದೂಡಿ ಒಳಬಂದು ಕೂಗಿದರು. ಮತ್ತೆ ಮತ್ತೆ ಕೂಗಿದರು.ಅವರ ಕಣ್ಣಲ್ಲಿ ಭಯ ಸುಳಿದು ಹೋಯಿತು. ಕೆಲವು ಇರುವೆಗಳು ನನ್ನನ್ನು ಎಳೆದೊಯ್ಯುತ್ತಿದ್ದವು.


ಹೀಗೆಂದರು…